ಮಕ್ಕಳ ಗ್ರಹಿಕಾ ಸಾಮರ್ಥ್ಯ ಅಗಾಧ . ಎಳವಯಸ್ಸಿನ್ನಲ್ಲೇ ಕನ್ನಡವನ್ನು ಪರಿಚಯಿಸಿದಲ್ಲಿ ಮಕ್ಕಳು ಅತಿ ಸುಲಭದಲ್ಲಿ ಕನ್ನಡದ ಪ್ರಾಥಮಿಕ ಜ್ಞಾನವನ್ನು ಗಳಿಸಬಲ್ಲರು . ಕನ್ನಡ ಅಕಾಡೆಮಿಯ ಕ್ರಮಬದ್ಧ ಪಠ್ಯಕ್ರಮದೊಂದಿಗೆ ಕನ್ನಡವನ್ನು ಹಂತಹಂತವಾಗಿ ಕಲಿಸುವ ನಿಟ್ಟಿನಲ್ಲಿ ತರಗತಿಗಳನ್ನು ಯೋಜಿಸಲಾಗಿದೆ .
ಕಾವೇರಿ :
ಹೆಸರಿನಂತೆ ಪುಟ್ಟಮಕ್ಕಳ ಸಿಹಿ ಸಿಹಿ ನುಡಿಗಳೇ ತುಂಬಿದ ತರಗತಿಗಳು. ಕನ್ನಡದ ಪರಿಚಯವಿಲ್ಲದ ಮಕ್ಕಳಿಗೆ ಈ ತರಗತಿಗಳು ಮಕ್ಕಳಿಗೆ ಕನ್ನಡವನ್ನು ಪರಿಚಯಿಸುವುದರ ಜೊತೆಗೆ ವರ್ಣಮಾಲೆ , ಉಚ್ಛಾರ ಹಾಗು ಪುಟ್ಟ ಪುಟ್ಟ ಪದ ಜೋಡಣೆಯನ್ನು ಕಲಿಸುತ್ತದೆ .
ತುಂಗಾ :
ಕನ್ನಡದ ಪ್ರಾಥಮಿಕ ಹಂತದ ಪರಿಚಯ ಈ ತರಗತಿಗೆ ಬೇಕಾದ ಪೂರ್ವಸಿದ್ಧತೆ. ಈ ತರಗತಿ ಮಕ್ಕಳಿಗೆ ಪದಜೋಡಣೆ , ವಾಕ್ಯರಚನೆ ಹಾಗು ಪ್ರಾಥಮಿಕ ಹಂತದ ವ್ಯಾಕರಣವನ್ನು ಪರಿಚಯಿಸುತ್ತದೆ ..
ಭದ್ರಾ :
ತುಂಗಾ ತರಗತಿಯ ಅನುಭವದೊಂದಿಗೆ ಈ ತರಗತಿಯಲ್ಲಿ ಮಕ್ಕಳು ತುಂಗೆಭದ್ರೆಯಂತೆ ನಿರರ್ಗಳವಾಗಿ ಕನ್ನಡವನ್ನು ಮಾತನಾಡುವುದರ ಜೊತೆಗೆ ಬರೆಯಲು ಕಲಿಸಲಾಗುತ್ತದೆ.
ಈ ಎಲ್ಲಾ ತರಗತಿಗಳಲ್ಲಿ ಕನ್ನಡವನ್ನು ಕಲಿಸುವುದಷ್ಟೇ ಅಲ್ಲದೆ ಗಾಯನ , ಅಭಿನಯಗಳ ಮೂಲಕ ಭಾಷಾಜ್ಞಾನವನ್ನು ಬೆಳೆಸಲು ಪ್ರಯತ್ನಿಸಲಾಗುತ್ತದೆ. ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವುದಕ್ಕೆ ಹಾಡು ಒಂದು ಉತ್ತಮ ಮಾಧ್ಯಮ. ಪದ್ಯವನ್ನು ರಾಗವಾಗಿ ಲಯದಲ್ಲಿ ಹಾಡಿ ಕಲಿತಾಗ ಕಂಠಪಾಠವೂ ಸರಾಗವಾಗಿ ಆಗುತ್ತದೆ. ಒಂದಾದ ಮೇಲೊಂದು ಸಾಲುಗಳನ್ನು ತಪ್ಪದೆ ಹೇಳುವಾಗ ಮಕ್ಕಳಿಗೆ ಭಾಷೆಯ ಹತೋಟಿ ದೊರೆತು ಮತ್ತೂ ಕಲಿಯಲು ಉತ್ಸುಕತೆ ಹೆಚ್ಚುತ್ತದೆ. ಹೊರನಾಡಿನಲ್ಲಿ ಬೆಳೆಯುತ್ತಿರುವ ಕನ್ನಡ ಕಂದಮ್ಮಗಳ ಪರಿಸರ ಹಾಗೂ ಜೀವನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವ ಈ ಪದ್ಯಗಳು, ನಮ್ಮ ಪುಟಾಣಿಗಳಿಗೊಂದು ಪ್ರೀತಿಯ ಕೊಡುಗೆ. ನಮ್ಮ ಕನ್ನಡ ಕಲಿ ಶಾಲೆಯಲ್ಲಿ ಇದುವರೆಗೆ ಕಲಿಸಿರುವ ಪದ್ಯಗಳ ಪಟ್ಟಿ ಹೀಗಿದೆ. ಕೆಲವು ಪದ್ಯಗಳನ್ನು ಮಕ್ಕಳು ಹಾಡಿ ಕಲಿತಿದ್ದಾರೆ ಮತ್ತೆ ಕೆಲವನ್ನು ನೃತ್ಯ ರೂಪದಲ್ಲಿ ಕಲಿತು ಖುಷಿಪಟ್ಟಿದ್ದಾರೆ.
ಪ್ರಾರ್ಥನೆ
೧ ತಾಯಿ ಶಾರದೆ ಲೋಕ ಪೂಜಿತೆ
ಶಿಶುಗೀತೆಗಳು
೧. ಕನ್ನಡ ಅಕ್ಷರ ಮಾಲೆ ಇಂದು ಕಲಿಯೋಣ
೨. ಒಂದು ಎರಡು ಕೈ ತೊಳಿ ಹೊರಡು
೩. ಒಂದು ಎರಡು ಶಾಲೆಗೆ ಹೊರಡು
೪. ಒಂದು ಎರಡು ಇಂಡಿಯಾಕ್ಕೆ ಹೊರಡು
ವಸಂತ ಋತುವಿನಲ್ಲಿ ಕಲಿಸುವ ಶಿಶುಗೀತೆಗಳು ( Spring season )
೧. ಹಕ್ಕಿ ಗೂಡಲಿ ಹಾಡುತ್ತೆ
೨ . ಬಣ್ಣ ನೋಡಿರಣ್ಣ ಸ್ಟ್ರಾಬೆರಿ ಚೆರ್ರಿ ಕೆಂಪು ಬಣ್ಣ
೩. ಹವಾಮಾನ ಹೇಗಿದೆ
೪. ಅಮ್ಮನ ಸಂಗವು ನನಗದು ಇಷ್ಟ
ಗ್ರೀಷ್ಮಋತುವಿನಲ್ಲಿ ಕಲಿಸುವ ಶಿಶುಗೀತೆಗಳು ( Summer Season )
೧. ಓಲ್ಡ್ ಮ್ಯಾಕ್ ಡಾನಾಲ್ಡ್ ತೋಟದಲಿ
೨. ಭಾನುವಾರ ಸಂಡೆ ಸಾಕರ್ ಆಡ್ತೀನಿ
೩. ನೋಡಲು ಬೇಕು ಕಣ್ಣು ಕೇಳಲು ಬೇಕು ಕಿವಿ
ಶರದ್ ಋತುವಿನಲ್ಲಿ ಕಲಿಸುವ ಶಿಶುಗೀತೆಗಳು ( Fall Seasaon )
೧. ಪುಟ್ಟ ಸಣ್ಣ ಜೇಡವು
೨. ಕೆಂಪು ಕೇಸರಿ ಹಳದಿ ಕಂದು ಬಣ್ಣದ ಎಲೆಗಳು
೩. ಟ್ರಿಕ್ಕು ಬೇಡಾಂದ್ರೆ ಟ್ರೀಟು ಕೊಡಿ
ಶಿಶಿರ ಋತುವಿನಲ್ಲಿ ಕಲಿಸುವ ಶಿಶುಗೀತೆಗಳು ( Winter Season )
೧.ಪಿಜ್ಜಾ ಅಂಗಡಿ ಪಾಪಣ್ಣ
೨. ಹತ್ತು ಹತ್ತು ಇಪ್ಪತ್ತು ಚಳಿಗಾಲ ಬಂದಾಯ್ತು
೩. ಮೂಟೆಗಳಲಿ ಗಿಫ್ಟು ಹೊತ್ತು ಸ್ಯಾಂಟ ಬರುವನು